ಚೀನಾದಲ್ಲಿ ಹುಟ್ಟಿ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ನಿಮಗೆಲ್ಲ ತಿಳಿದಿದೆ. ಕೋರೋನ ವೈರಸ್ ಬಗ್ಗೆ ನಾನು ನಿಮಗೆ ಹಿಂದಿನ ಬ್ಲಾಗ್ ನಲ್ಲಿ ತಿಳಿಸಿದ್ದೇನೆ. ಓದದವರು ಒಮ್ಮೆ ಓದಿ. ಇವಾಗ ಭಯಬೀಳಿಸುವ ವಿಷಯವೆಂದರೆ ಕೋರೋನ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ವೈರಸ್ ಗೆ ಭಾರತೀಯರು ತುಂಬ ಭಯಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ ಸುಮಾರು 30 ಮಂದಿಗೆ ಕೋರೋನ ವೈರಸ್ ಸೋಂಕು ತಗುಲಿರುವ ವರದಿಯಾಗಿದೆ.
Saturday, March 7, 2020
Wednesday, March 4, 2020
ಚಿಕನ್ ತಿನ್ನದವರು ಕಂಡು ಹಿಡಿದ ಚಿಕನ್ ಮಸಾಲಾ.....
ಆಧುನಿಕ ಜಗತ್ತಿನ ಪ್ರತಿಯೊಬ್ಬರಿಗೂ ಪ್ರತಿಯೊಂದು ಕೆಲಸನೂ ಆದಷ್ಟು ಬೇಗನೆ ಆಗಬೇಕು. ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಮನೆ ಕೆಲಸವೆಲ್ಲ ಬೇಗ ಬೇಗ ಮಾಡಿ ಮುಗಿಸಿ ಟಿವಿ ಮುಂದೆ ಕುಳಿತುಕೊಳ್ಳುವ ಆತುರ ಹೆಚ್ಚು. ಅದರಲ್ಲೂ ಅಡುಗೆ ಕೆಲಸವಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಟಿವಿ ಮುಂದೆ ಕುಳಿತುಕೊಂಡು ತರಕಾರಿ ಹೆಚ್ಚುವುದು, ಅಡುಗೆ ಮನೆಗೆ ಕಾಣಿಸುವಂತೆ ಟಿವಿಯನ್ನೂ ಇಟ್ಟಿರುತ್ತಾರೆ.
Friday, February 28, 2020
ಕೊರೋನಾ ವೈರಸ್ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ
ಸದ್ಯ ಜಗತ್ತಿನಾದ್ಯಂತ ಸುದ್ದಿಯಲ್ಲಿರೊ, ಭಯಭೀತಿ ಉಂಟು ಮಾಡಿರೋ ವಿಷಯವೆಂದರೆ ಕೊರೋನಾ ವೈರಸ್. ಈ ಕೊರೋನಾ ವೈರಸ್ ಎಂದರೆ ಏನು? ಹೇಗೆ ಹುಟ್ಟಿಕೊಂಡಿತು? ಹರಡುವ ಬಗೆ ಹೇಗೆ? ರೋಗ ಲಕ್ಷಣಗಳೇನು? ಹೀಗೆ ನಾನಾ ಬಗೆಯ ಪ್ರಶ್ನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಂಡಿತು. ಇದನ್ನು ಹುಡುಕಲು ಶುರು ಮಾಡಿದೆ. ಹಾಗಂತ ನಾನೇನು ವಿಜ್ಞಾನಿ ಅಲ್ಲ. ಇಂಟರ್ನೆಟ್ ನಲ್ಲಿ ಹುಡುಕಿದೆ. ಆಗ ನನಗೆ ತಿಳಿದ ವಿಷಯವನ್ನು ನಿಮಗೂ ತಿಳಿಸುವ ಹಂಬಲವಾಯಿತು. ಅದಕ್ಕಾಗಿ ಕೊರೋನಾ ವೈರಸ್ ನ ಬಗ್ಗೆ ಸರಳವಾಗಿ ತಿಳಿಯೋಣ ಬನ್ನಿ.....
Friday, February 21, 2020
ಮಹಾ ಶಿವರಾತ್ರಿಯ ಬಗ್ಗೆ ನಿಮಗೆಷ್ಟು ಗೊತ್ತು?..
"ಓಂ ನಮಃ ಶಿವಾಯ"
ಮಹಾ ಶಿವರಾತ್ರಿಯು ಶಿವನ ಆರಾಧನೆಯೊಂದಿಗೆ ಆಚರಿಸುವ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬವಾಗಿದೆ. ಇದು ಶಿವನ ಸ್ವರ್ಗಿಯ ನೃತ್ಯವನ್ನು ಪ್ರದರ್ಶಿಸುವ ರಾತ್ರಿಯನ್ನು ಮತ್ತು ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವ ಸ್ಮರಣೆಯನ್ನು ಸೂಚಿಸುತ್ತದೆ. ಮಹಾ ಶಿವರಾತ್ರಿಯು ಚಳಿಗಾಲದ ಕೊನೆಯಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶಿವನಿಗಾಗಿ ಉಪವಾಸ ಮಾಡುವುದು, ಶಿವ ನಾಮ ಸ್ಮರಣೆ, ದಾನ, ಧ್ಯಾನ ಮತ್ತು ಶಿವ ಪೂಜೆ ಮಾಡುವುದು ವಿಶೇಷ. ಈ ದಿನ ಯಾವ ಜೀವ ಜಂತುಗಳಿಗೂ ನೋವುಂಟು ಮಾಡದೇ, ನಮ್ಮ ತಪ್ಪಿಗೆ ಕ್ಷಮೆ ಯಾಚಿಸುವುದು ಹಾಗು ಪ್ರತಿಯೊಂದರಲ್ಲೂ ಶಿವನನ್ನು ಕಾಣಬೇಕು ಎಂಬ ನಂಬಿಕೆ ಇದೆ. ಭಕ್ತರು ರಾತ್ರಿಯೆಲ್ಲಾ ಜಾಗರಣೆ ಕೂತು ಶಿವನನ್ನು ಧ್ಯಾನಿಸುವುದನ್ನು ನಾವು ನೋಡಬಹುದು. ಇದೊಂದು ಪ್ರಾಚೀನ ಕಾಲದ ಹಬ್ಬವಾಗಿದ್ದು,

Thursday, February 13, 2020
ನೀರಿನಲ್ಲಿ ಒಂದು ದಿನದ ಆಟ...
ನಾವು ಕಳೆದ ಭಾನುವಾರ (9-2-2020) ಒಂದು ಫ್ಯಾಮಿಲಿ ಟೂರಿಗೆ ಹೋಗಿದ್ದೆವು. ಅದರ ಅನುಭವವನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಕಾರಣಕ್ಕಾಗಿ ಈ ಬ್ಲಾಗ್ ಬರೆಯುತ್ತಿದ್ದೇನೆ.
ನಾವು ಆರು ಜನ ಕಾರಿನಲ್ಲಿ ಮಂಗಳೂರಿನಿಂದ 9 ಗಂಟೆಗೆ ಹೊರಟು, ಉಡುಪಿ ಜಿಲ್ಲೆ, ಹೆಬ್ರಿ ತಾಲ್ಲೂಕಿನ ಕರ್ಜೆಯಲ್ಲಿರುವ ಅಂಜಲಿ ವಾಟರ್ ಪಾರ್ಕಿಗೆ ಸುಮಾರು ಬೆಳ್ಳಗ್ಗೆ 11 ಗಂಟೆಗೆ ಹೋದೆವು. ಕಾರನ್ನು ಹೊರಗಡೆ ನಿಲ್ಲಿಸಿ, ಟಿಕೆಟ್ ಕೌಂಟರಿನಲ್ಲಿ ಟಿಕೆಟ್ ಪಡೆದು, ಆ ದಿನ ನಿಶಬ್ದವಾಗಿದ್ದ ವಾಟರ್ ಪಾರ್ಕ್ ಒಳಗೆ ಹೋದ ಮೊದಲಿಗರೆ ನಾವು. ಟಿಕೆಟ್ ಬೆಲೆ ಎಷ್ಟು ಇರಬಹುದೆಂದು ಯೋಚಿಸುತ್ತಿದ್ದೀರಾ? ಹೇಳ್ತೇನೆ ಕೇಳಿ. ದೊಡ್ಡವರಿಗೆ Rs 450/- ಮತ್ತು ಮಕ್ಕಳಿಗೆ Rs 350/- (ಊಟ ತಿಂಡಿ ಖರ್ಚು Extra). ನಾವು ಬಟ್ಟೆ ಬದಲಾಯಿಸಿ, ನೀರಿನಲ್ಲಿ ಆಟವಾಡಲು ಹೊರಟೆವು.

Friday, February 7, 2020
ಕನ್ನಡ ಶಾಲೆಯ ಇವತ್ತಿನ ನೈಜ ಸ್ಥಿತಿ ನಿಮ್ಮ ಮುಂದೆ
ಕಳೆದ ಸುಮಾರು ದಿನಗಳ ಹಿಂದೆ ನಾನೊಂದು ಕನ್ನಡ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದೆ. ಅದೊಂದು ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು, ಅಲ್ಲಿ ಅಂಗನವಾಡಿಯಿಂದ 5ನೇ ತರಗತಿಯವರೆಗೆ ಸುಮಾರು 35 ಮಕ್ಕಳು ಕಲಿಯುತ್ತಿದ್ದಾರೆ. ಈ ವಿಷಯಗಳನ್ನು ಯಾಕೆ ಹೇಳುತ್ತಿದ್ದೇನೆಂದರೆ ಕನ್ನಡ ಶಾಲೆಯ ಇವತ್ತಿನ ನೈಜ ಸ್ಥಿತಿಯನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನವಷ್ಟೇ.
ಕಾರ್ಯಕ್ರಮ ಶುರುವಾಯಿತು, ನಾನು ಮುಂದಿನ ಕುರ್ಚಿಯಲ್ಲಿ ಕುಳಿತು ನೋಡುತ್ತಿದ್ದೆ. ನನ್ನ ಪಕ್ಕದಲ್ಲಿ ಅದೇ ಶಾಲೆಯ ಸುಮಾರು 13 ವರ್ಷಗಳ ಹಿಂದೆ ಶಿಕ್ಷಣ ಕೊಟ್ಟ ಶಿಕ್ಷಕಿಯೊಬ್ಬರು ಕುಳಿತಿದ್ರು ಅವರನ್ನ ನೋಡಿದ ಅವರ ವಿದ್ಯಾರ್ಥಿಗಳು ಬಂದು ಅವರನ್ನು ಮಾತಾಡಿಸಿ ಹೋಗ್ತಾ ಇದ್ರೂ. ಆ ಶಿಕ್ಷಕಿಯ ಮುಖದಲ್ಲಿ ಹೆಮ್ಮೆ, ಸಂತೋಷವನ್ನು ನಾ ಕಂಡೆ,

Subscribe to:
Posts (Atom)