ಕಳೆದ ಸುಮಾರು ದಿನಗಳ ಹಿಂದೆ ನಾನೊಂದು ಕನ್ನಡ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದೆ. ಅದೊಂದು ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು, ಅಲ್ಲಿ ಅಂಗನವಾಡಿಯಿಂದ 5ನೇ ತರಗತಿಯವರೆಗೆ ಸುಮಾರು 35 ಮಕ್ಕಳು ಕಲಿಯುತ್ತಿದ್ದಾರೆ. ಈ ವಿಷಯಗಳನ್ನು ಯಾಕೆ ಹೇಳುತ್ತಿದ್ದೇನೆಂದರೆ ಕನ್ನಡ ಶಾಲೆಯ ಇವತ್ತಿನ ನೈಜ ಸ್ಥಿತಿಯನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನವಷ್ಟೇ.
ಕಾರ್ಯಕ್ರಮ ಶುರುವಾಯಿತು, ನಾನು ಮುಂದಿನ ಕುರ್ಚಿಯಲ್ಲಿ ಕುಳಿತು ನೋಡುತ್ತಿದ್ದೆ. ನನ್ನ ಪಕ್ಕದಲ್ಲಿ ಅದೇ ಶಾಲೆಯ ಸುಮಾರು 13 ವರ್ಷಗಳ ಹಿಂದೆ ಶಿಕ್ಷಣ ಕೊಟ್ಟ ಶಿಕ್ಷಕಿಯೊಬ್ಬರು ಕುಳಿತಿದ್ರು ಅವರನ್ನ ನೋಡಿದ ಅವರ ವಿದ್ಯಾರ್ಥಿಗಳು ಬಂದು ಅವರನ್ನು ಮಾತಾಡಿಸಿ ಹೋಗ್ತಾ ಇದ್ರೂ. ಆ ಶಿಕ್ಷಕಿಯ ಮುಖದಲ್ಲಿ ಹೆಮ್ಮೆ, ಸಂತೋಷವನ್ನು ನಾ ಕಂಡೆ,
ಆ ಕ್ಷಣದಲ್ಲಿ ನನ್ನೆಲ್ಲ ಶಿಕ್ಷಕರು ನನ್ನ ಕಣ್ಣ ಮುಂದೆ ಬಂದು ಹೋದ್ರು. ನಾನು ಆ ಶಿಕ್ಷಕಿಯವರನ್ನು ಮಾತನಾಡಿಸಿದೆ. ಕ್ಷಮಿಸಿ ಅವರ ಹೆಸರು ನನಗಿಗಾ ಮರೆತೊಗಿದೆ. ಹೀಗೆ ಮಾತನಾಡುತ್ತ ಹೇಳಿದ್ರು "10 ವರ್ಷಗಳ ಹಿಂದೆ ಪ್ರತಿ ಕ್ಲಾಸ್ಸಿನಲ್ಲಿ 25 - 35 ಮಕ್ಳು ಇರ್ತಿದ್ರು, ಈವಾಗ ಪೂರ್ತಿ ಶಾಲೆಯಲ್ಲಿ ಅಬ್ಬಬ್ಬಾ ಅಂದ್ರೆ 35 ಮಕ್ಳು ಇದ್ದಾರೆ. ಹೀಗೆ ಆದ್ರೆ ಈ ಶಾಲೆ ಮುಚ್ಚಬೇಕಾಗುತ್ತೆ" ಎಂದು ಬೇಸರ ವ್ಯಕ್ತಪಡಿಸಿದ್ರು. ಮಾತು ಮುಂದುವರೆಸುತ್ತಾ ಹೇಳಿದ್ರು " ನಾನು ಈವಾಗ ಇರುವ ಶಾಲೆಯಲ್ಲಿ 7ನೇ ಕ್ಲಾಸ್ಸಿನಲ್ಲಿ ಕೇವಲ 8 ಮಕ್ಕಳು ಇದ್ದಾರೆ. ಎಲ್ಲ ಮಕ್ಕಳ ತಂದೆ ತಾಯಿ ಪ್ರತಿಷ್ಠೆಗಾಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸ್ತಾರೆ, ಹೀಗಾಗಿ ಇಲ್ಲಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ" ಅಂದ್ರು. ನಿಜ ಅಲ್ವಾ ಗೆಳೆಯರೇ ಅವರ ಪ್ರತಿಯೊಂದು ಮಾತು.
ಸುಮಾರು 15 ವರ್ಷಗಳ ಹಿಂದೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೋ ಒಂದೊಂದು ಇದ್ದವು. ನಮ್ಮ ಸರಕಾರದ ಬೇಜವಾಬ್ದಾರಿಯಿಂದ ಇವತ್ತು ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಅವತ್ತು ಕನ್ನಡ ಶಾಲೆಯಲ್ಲಿ ಕಲಿತವರು ಇವತ್ತು ತುಂಬ ದೊಡ್ಡ ದೊಡ್ಡ ಸ್ಥಾನದಲ್ಲಿರುವ ನಿದರ್ಶನಗಳು ನಮ್ಮ ಮುಂದೆ ಇದೆ. ಕನ್ನಡ ಉಳಿಸಬೇಕೆಂದು ಬಹಳ ಜನ ಹೋರಾಟ ನಡೆಸುತ್ತಿದ್ದಾರೆ ಸಂತೋಷದ ವಿಷಯವೇ ಆದರೆ, ಅದರಲ್ಲಿ ಎಷ್ಟು ಜನರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆ? ಕನ್ನಡ ಶಾಲೆಯಲ್ಲಿ ಶಿಕ್ಷಣ ಕೊಡುವ ಶಿಕ್ಷಕರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ?. ಉತ್ತರ: ಇಲ್ಲ, ಅವರ ಮಕ್ಕಳು ಓದುತ್ತಿರುವುದು ಪ್ರತಿಷ್ಠಿತ ಇಂಗ್ಲಿಷ್ ಶಾಲೆಯಲ್ಲಿ ( ಬೆರಳೆಣಿಕೆಯಷ್ಟು ಮಕ್ಕಳನ್ನು ಹೊರತುಪಡಿಸಿ).
ಕನ್ನಡ ಶಾಲೆಯ ಅಭಿವೃದ್ಧಿಗೆ ನಮ್ಮ ಸರಕಾರ ಸರಿಯಾದ ಕ್ರಮ ಕೈಗೊಂಡು, ಕನ್ನಡ ಶಾಲೆಗಳತ್ತ ಗಮನ ಹರಿಸಬೇಕು. ವಿಶೇಷ ಕಾನೂನುಗಳನ್ನೂ ಅನುಷ್ಠಾನಗೊಳಿಸಬೇಕು. ಉದಾಹರಣೆಗೆ ಕನ್ನಡ ಶಾಲೆಯಲ್ಲಿ ಕಲಿತವರಿಗೆ ಮಾತ್ರ ಸರಕಾರಿ ಉದ್ಯೋಗ, ವಿದ್ಯಾರ್ಥಿ ವೇತನ, ರಾಜಕೀಯ ಪ್ರವೇಶ, ಕನ್ನಡ ಪುಸ್ತಕಗಳ ಮುದ್ರಣ ಹಕ್ಕು ಹೀಗೆ ನಾನಾ ರೀತಿಯ ಕಾನೂನುಗಳನ್ನು ಜಾರಿಗೆ ತರಬೇಕು. ಸರಕಾರ ನಡೆಸುವವರಿಗೆ ಯಾವುದರ ಚಿಂತೆಯು ಇಲ್ಲ ಅವರ ಹೊಟ್ಟೆ, ಕಿಸೆ ತುಂಬಿದರೆ ಸಾಕು. ಅಧಿಕಾರಿಗಳು ಅಷ್ಟೇ ಅವರಿಗೂ ಯಾವುದರ ಪರಿವೆ ಇರುವುದಿಲ್ಲ. ಆದ್ದರಿಂದ ಓದುಗರಲ್ಲಿ ನನ್ನದೊಂದು ಮನವಿ ದಯಮಾಡಿ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಿ, ನಮ್ಮಿಂದಲೇ ಕನ್ನಡ ಶಾಲೆಗಳ ಉಳಿವು ಶುರುವಾಗಲಿ ಅನ್ನುವುದೇ ನನ್ನ ಒಂದು ಆಶಯ...

No comments:
Post a Comment