"ಓಂ ನಮಃ ಶಿವಾಯ"
ಮಹಾ ಶಿವರಾತ್ರಿಯು ಶಿವನ ಆರಾಧನೆಯೊಂದಿಗೆ ಆಚರಿಸುವ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬವಾಗಿದೆ. ಇದು ಶಿವನ ಸ್ವರ್ಗಿಯ ನೃತ್ಯವನ್ನು ಪ್ರದರ್ಶಿಸುವ ರಾತ್ರಿಯನ್ನು ಮತ್ತು ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವ ಸ್ಮರಣೆಯನ್ನು ಸೂಚಿಸುತ್ತದೆ. ಮಹಾ ಶಿವರಾತ್ರಿಯು ಚಳಿಗಾಲದ ಕೊನೆಯಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶಿವನಿಗಾಗಿ ಉಪವಾಸ ಮಾಡುವುದು, ಶಿವ ನಾಮ ಸ್ಮರಣೆ, ದಾನ, ಧ್ಯಾನ ಮತ್ತು ಶಿವ ಪೂಜೆ ಮಾಡುವುದು ವಿಶೇಷ. ಈ ದಿನ ಯಾವ ಜೀವ ಜಂತುಗಳಿಗೂ ನೋವುಂಟು ಮಾಡದೇ, ನಮ್ಮ ತಪ್ಪಿಗೆ ಕ್ಷಮೆ ಯಾಚಿಸುವುದು ಹಾಗು ಪ್ರತಿಯೊಂದರಲ್ಲೂ ಶಿವನನ್ನು ಕಾಣಬೇಕು ಎಂಬ ನಂಬಿಕೆ ಇದೆ. ಭಕ್ತರು ರಾತ್ರಿಯೆಲ್ಲಾ ಜಾಗರಣೆ ಕೂತು ಶಿವನನ್ನು ಧ್ಯಾನಿಸುವುದನ್ನು ನಾವು ನೋಡಬಹುದು. ಇದೊಂದು ಪ್ರಾಚೀನ ಕಾಲದ ಹಬ್ಬವಾಗಿದ್ದು,
ಈ ಹಬ್ಬದ ಮೂಲ ದಿನಾಂಕ ತಿಳಿದಿಲ್ಲ. ಉತ್ತರ ಭಾರತದ ಕೆಲವು ಶಿವನ ಭಕ್ತರು ಗಾಂಜಾವನ್ನು ಧೂಮಪಾನ ಮಾಡುವ ಮೂಲಕ ಆಚರಿಸುತ್ತಾರೆ. ಹಗಲಿನಲ್ಲಿ ಆಚರಿಸುವ ಹೆಚ್ಚಿನ ಹಿಂದೂ ಹಬ್ಬಗಳಿಗಿಂತ ಶಿವರಾತ್ರಿಯು ವಿಭಿನ್ನವಾಗಿ ಆಚರಿಸುವ ಹಬ್ಬ. ಶಿವನಿಗೆ ಹಣ್ಣುಗಳು, ಬಿಲ್ವಪತ್ರೆ ಎಲೆಗಳು , ಸಿಹಿ ತಿಂಡಿಗಳು ಮತ್ತು ಹಾಲನ್ನು ಅರ್ಪಿಸಿ, ಶಿವನ ಪವಿತ್ರ ಮಂತ್ರವಾದ "ಓಂ ನಮಃ ಶಿವಾಯ" ವನ್ನು ದಿನವಿಡೀ ಜಪಿಸಿ ಪೂಜಿಸಲಾಗುತ್ತದೆ. ಮಹಾ ಶಿವರಾತ್ರಿಯನ್ನು ಲೂನಿ-ಸೌರ ಕ್ಯಾಲೆಂಡರ್ ಆಧರಿಸಿ ಮೂರು ಮತ್ತು ಹತ್ತು ದಿನಗಳಲ್ಲಿ ಆಚರಿಸಲಾಗುತ್ತದೆ.
ಮಹಾ ಶಿವರಾತ್ರಿಯ ಬಗ್ಗೆ ಹಲವಾರು ಪುರಾಣಗಳಲ್ಲಿ ಉಲ್ಲೇಖವಿದೆ. ಅದರಲ್ಲಿ ವಿಶೇಷವಾಗಿ ಸ್ಕಂದ ಪುರಾಣ, ಲಿಂಗ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಹಾಶಿವರಾತ್ರಿಯ ಮಹತ್ವದ ಕುರಿತು ಹಲವಾರು ಕಥೆಗಳಿವೆ. ಶೈವ ಸಂಪ್ರದಾಯದ ಕಥೆಯ ಪ್ರಕಾರ, ಶಿವನು ಸೃಷ್ಟಿ, ಲಯ ಮತ್ತು ವಿನಾಶದ ಸ್ವರ್ಗಿಯ ನೃತ್ಯವನ್ನು ಪ್ರದರ್ಶಿಸುವ ರಾತ್ರಿಯಾಗಿದೆ. ಮತ್ತೊಂದು ಕಥೆಯ ಪ್ರಕಾರ, ಶಿವ ಮತ್ತು ಪಾರ್ವತಿ ಕಲ್ಯಾಣವಾದ ರಾತ್ರಿ ಎಂಬ ಉಲ್ಲೇಖವಿದೆ. ಪ್ರತಿಯೊಂದು ಕಥೆಗಳು ಆಯಾಯ ಪ್ರದೇಶಗಳಿಗೆ ಬೇರೆಬೇರೆಯಾಗಿರುತ್ತದೆ.
ಹಿಂದೂ ಪುರಾಣಗಳ ಪ್ರಕಾರ ಹನ್ನೆರಡು ಜೋತಿರ್ಲಿಂಗಳನ್ನು ಕಾಣಬಹುದು. ಅವುಗಳೆಂದರೆ - ಗುಜರಾತಿನ ಸೋಮನಾಥೇಶ್ವರ, ಆಂದ್ರಪ್ರದೇಶದ ಮಲ್ಲಿಕಾರ್ಜುನ, ಮಧ್ಯಪ್ರದೇಶದ ಮಹಾಕಾಳೇಶ್ವರ, ಜಾರ್ಖಂಡಿನ ವೈದ್ಯನಾಥೇಶ್ವರ, ಮಹಾರಾಷ್ಟ್ರದ ಭೀಮಾಶಂಕರ, ತಮಿಳುನಾಡಿನ ರಾಮೇಶ್ವರ, ಮಧ್ಯಪ್ರದೇಶದ ಓಂಕಾರೇಶ್ವರ, ಉತ್ತರಪ್ರದೇಶದ ವಿಶ್ವನಾಥ, ಮಹಾರಾಷ್ತ್ರದ ಗ್ರಿಷ್ಣೇಶ್ವರ, ಮಹಾರಾಷ್ಟ್ರದ ತ್ರಯಂಬಕೇಶ್ವರ, ಗುಜರಾತಿನ ನಾಗೇಶ್ವರ ಮತ್ತು ಉತ್ತರಕಾಂಡನ ಕೇದಾರನಾಥ. ಮಹಾ ಶಿವರಾತ್ರಿಯು ಪ್ರಮುಖ ಹಿಂದೂ ದೇವಾಲಯಗಳಾದ ಒಡಿಶಾದ ಕೋನಾರ್ಕ್, ಮಧ್ಯಪ್ರದೇಶದ ಖಜುರಾಹೊ, ಕರ್ನಾಟಕದ ಪಟ್ಟದಕಲ್, ಗುಜರಾತ್ ನ ಮೊಧೇರಾ ಮತ್ತು ತಮಿಳುನಾಡಿನ ಚಿದಂಬರಂನಲ್ಲಿ ವಾರ್ಷಿಕ ನೃತ್ಯೋತ್ಸವಗಳಿಗಾಗಿ ಕಲಾವಿದರ ಐತಿಹಾಸಿಕ ಸಂಗಮವಾಗಿ ಆಚರಿಸಲ್ಪಡುತ್ತದೆ. ಮಹಾಶಿವರಾತ್ರಿಯನ್ನು ಅದಿಯೋಗಿ ತನ್ನ ಅಸ್ತಿತ್ವವನ್ನು ಬೌತಿಕ ಮಟ್ಟದಲ್ಲಿ ಜಾಗೃತಿಗೊಳಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಧ್ಯಾನಕಾರನು ಸಮಯ, ಸ್ಥಳ ಮತ್ತು ಕಾರಣವನ್ನು ಮೀರುತ್ತಾನೆ. ಇದು ಆತ್ಮದ ಪ್ರಕಾಶಮಾನವಾದ ರಾತ್ರಿಯೆಂದು ಪರಿಗಣಿಸಲ್ಪಟ್ಟಿದೆ. ಶಿವನ ಮಂತ್ರಗಳಲ್ಲೂ ನಾನಾ ರೀತಿಯ ಮಂತ್ರಗಳಿವೆ. ಅದರಲ್ಲಿ ಕೆಲವು,
೧. ಶಿವ ಪಂಚಾಕ್ಷರಿ ಮಂತ್ರ - ಓಂ ನಮಃ ಶಿವಾಯ
೨. ರುದ್ರ ಮಂತ್ರ - ಓಂ ನಮೋ ಭಾಗವತೇ ರುದ್ರಾಯ
೩. ಶಿವ ಗಾಯತ್ರಿ ಮಂತ್ರ - ಓಂ ತತ್ಪುರುಷಾಯ ವಿದ್ಮಹೇ ಮಹದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್.
೪. ಶಿವ ಧ್ಯಾನ ಮಂತ್ರ - ಕರಾಚಾರಣಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮನಸಾಪರಾಧಂ ವಾ ವಿಹಿತಂ ವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುನಾಭ್ಧೇ ಶ್ರೀ ಮಹಾದೇವ ಶಂಭೋ .
೫.ಶಿವ ಮೃತ್ಯುಂಜಯ ಮಂತ್ರ - ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವರುಕ ಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯಮಾಮೃತಾತ್
ಕರ್ನಾಟಕದ ಪುಣ್ಯ ಕ್ಷೇತಗಳಾದ ಮಂಜುನಾಥೇಶ್ವರ ದೇವಸ್ಥಾನ, ಧರ್ಮಸ್ಥಳ, ಮಂಜುನಾಥೇಶ್ವರ ದೇವಸ್ಥಾನ, ಕದ್ರಿ, ಗೋಕರ್ಣಾಥೇಶ್ವರ ದೇವಸ್ಥಾನ, ಕುದ್ರೋಳಿ, ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ, ಮುರ್ಡೇಶ್ವರ ದೇವಸ್ಥಾನ, ಮುರ್ಡೇಶ್ವರ, ಕೋಟಿಲಿಂಗೇಶ್ವರ ದೇವಸ್ಥಾನ, ಕೋಲಾರ, ಬದವಿಲಿಂಗ ದೇವಸ್ಥಾನ, ಹಂಪಿ, ವಿರೂಪಾಕ್ಷ ದೇವಸ್ಥಾನ, ಹಂಪಿ, ಮತ್ತು ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು - ಈ ಎಲ್ಲ ದೇವಸ್ಥಾನಗಳಲ್ಲಿ ಶಿವರಾತ್ರಿಯ ದಿವಸ ವಿಶೇಷವಾದ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಸಾವಿರಾರು ಭಕ್ತರು ಶಿವನಾಮ ಪಠಿಸುತ್ತ ಪಾದಯಾತ್ರೆ ಕೈಗೊಂಡು ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ.
ನಾವು ನೀವು ಸೇರಿ ಶಿವನ ನಾಮ ಸ್ಮರಣೆ ಮಾಡಿ, ಆ ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗೋಣ. ಈ ಶಿವರಾತ್ರಿ ಸಮಸ್ತರಿಗೂ ಶುಭಮಂಗಳ ತರಲಿ. "ಓಂ ನಮಃ ಶಿವಾಯ"

Very Nice 👍👌
ReplyDeleteThank you 🙏🏼
Delete