ನಾವು ಕಳೆದ ಭಾನುವಾರ (9-2-2020) ಒಂದು ಫ್ಯಾಮಿಲಿ ಟೂರಿಗೆ ಹೋಗಿದ್ದೆವು. ಅದರ ಅನುಭವವನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಕಾರಣಕ್ಕಾಗಿ ಈ ಬ್ಲಾಗ್ ಬರೆಯುತ್ತಿದ್ದೇನೆ.
ನಾವು ಆರು ಜನ ಕಾರಿನಲ್ಲಿ ಮಂಗಳೂರಿನಿಂದ 9 ಗಂಟೆಗೆ ಹೊರಟು, ಉಡುಪಿ ಜಿಲ್ಲೆ, ಹೆಬ್ರಿ ತಾಲ್ಲೂಕಿನ ಕರ್ಜೆಯಲ್ಲಿರುವ ಅಂಜಲಿ ವಾಟರ್ ಪಾರ್ಕಿಗೆ ಸುಮಾರು ಬೆಳ್ಳಗ್ಗೆ 11 ಗಂಟೆಗೆ ಹೋದೆವು. ಕಾರನ್ನು ಹೊರಗಡೆ ನಿಲ್ಲಿಸಿ, ಟಿಕೆಟ್ ಕೌಂಟರಿನಲ್ಲಿ ಟಿಕೆಟ್ ಪಡೆದು, ಆ ದಿನ ನಿಶಬ್ದವಾಗಿದ್ದ ವಾಟರ್ ಪಾರ್ಕ್ ಒಳಗೆ ಹೋದ ಮೊದಲಿಗರೆ ನಾವು. ಟಿಕೆಟ್ ಬೆಲೆ ಎಷ್ಟು ಇರಬಹುದೆಂದು ಯೋಚಿಸುತ್ತಿದ್ದೀರಾ? ಹೇಳ್ತೇನೆ ಕೇಳಿ. ದೊಡ್ಡವರಿಗೆ Rs 450/- ಮತ್ತು ಮಕ್ಕಳಿಗೆ Rs 350/- (ಊಟ ತಿಂಡಿ ಖರ್ಚು Extra). ನಾವು ಬಟ್ಟೆ ಬದಲಾಯಿಸಿ, ನೀರಿನಲ್ಲಿ ಆಟವಾಡಲು ಹೊರಟೆವು.
ಸ್ವಿಮ್ಮಿಂಗ್ ಪೂಲ್ ಸಮೀಪಿಸುತ್ತಿದ್ದಂತೆ ನನ್ನ ಹೆಂಡತಿಯನ್ನು ನೀರಿಗೆ ತಳ್ಳಿದೆ ನಾನು ಹಾರಿದೆ, ನೀರಿಗೆ ಬಿದ್ದವಳೇ ಕಾಪಾಡಿ..... ಕಾಪಾಡಿ.... ಅಂತ ಕೂಗಿಕೊಳ್ಳಲು ಶುರು ಮಾಡಿದಳು. ನಾನು ಕೈ ಹಿಡಿದು ಮೇಲಕ್ಕೆಳೆದೆ, ನೇರ ನಿಂತ ಮೇಲೆ ಗೊತ್ತಾಗಿದ್ದು ಅಲ್ಲಿ ನೀರು ಇರೋದೇ ಸೊಂಟದ ತನಕ ಅಂತ. ನಮಗೆಲ್ಲ ನಗುವೇ ನಗು. ನಂತರ ಮಗನನ್ನು ನೀರಿಗೆ ಇಳಿಸಿದೆವು, ಅವನು ಸ್ವಲ್ಪ ಹೊತ್ತು ನೀರಿನಲ್ಲಿ ಆಟ ಆಡಿ ದಡದ ಮೇಲೆ ಹೋಗಿ ಕುಳಿತುಕೊಂಡ ನಾನು, ನನ್ನ ಹೆಂಡತಿ, ಅವಳ ಫ್ರೆಂಡ್ ಶ್ವೇತಾ, ಹಾಗು ಡ್ರೈವರ್ ನಾವು ನಾಲ್ಕು ಜನ ಸೇಫ್ಟಿ ಟ್ಯೂಬಿನಲ್ಲಿ ಕುಳಿತು ವಾಟರ್ ಸ್ಲಡಿನಲ್ಲಿ ಕುಳಿತೆವು. ತುಂಬ ಮಜಾ ಬಂತು ನನ್ನ ಮೊದಲ ಅನುಭವ ಇದು. ಮೂರೂ ರೀತಿಯ ವಾಟರ್ ಸ್ಲಾಯ್ಡ್ ಇತ್ತು. ಮೂರರಲ್ಲೂ ಕುಳಿತೆವು. ಇಷ್ಟು ಹೊತ್ತಿಗೆ ಸುಮಾರು ಹತ್ತು - ಹದಿನೈದು ಜನರ ತಂಡ ಬಂತು, ನಂತರ ನಾಲ್ಕು ಜನರ ಹಾಗು ಆರು ಜನರ ಇಂದೊಂದು ತಂಡ ಬಂದು ನಮ್ಮನ್ನು ಸೇರಿಕೊಂಡರು, ಎಲ್ಲರೂ ಅಪರಿಚಿತರೇ. ನಾವು ಇಲ್ಲಿ ಜನ ಜಾಸ್ತಿ ಇರುವ ಕಾರಣ 5.5 ಅಡಿ ಆಳವಿರುವ ಸ್ವಿಮ್ಮಿಂಗ್ ಪೂಲ್ಗೆ ಹೋದೆವು, ಹೋಗುವಾಗಲೇ ಸೇಫ್ಟಿ ಟ್ಯೂಬ್ ತೆಗೆದುಕೊಂಡು ಹೋದೆವು. ನಾನಗೆ ಮತ್ತು ಡ್ರೈವರ್ ಗೆ ಈಜು ಗೊತ್ತಿರುವುದ್ದರಿಂದ ಸರಾಗವಾಗಿ ನೀರಿನಲ್ಲಿ ಈಜಿದೆವು.
ಈಗ ಸಮಯ ಸರಿಯಾಗಿ 1 ಗಂಟೆಯಾಗಿತ್ತು. ಅಲ್ಲೇ ಇದ್ದ ರೆಸ್ಟೋರೆಂಟ್ ಗೆ ಊಟಕ್ಕೆ ಹೋದೆವು. ಊಟದಲ್ಲಿ ಎರಡು ಆಯ್ಕೆ ಇತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ. ಸಸ್ಯಾಹಾರಿ ಊಟಕ್ಕೆ Rs 150/- ಮತ್ತು ಮಾಂಸಾಹಾರಿ ಊಟ Rs 200/-. ನಾವು ಸಸ್ಯಾಹಾರಿ ಊಟ ತೆಗೆದುಕೊಂಡೆವು. ಊಟ ಬೆಲೆಗೆ ತಕ್ಕಂತೆ ರುಚಿನೂ ಇಲ್ಲ, ಹೊಟ್ಟೆ ತುಂಬುವಷ್ಟು ಇರಲಿಲ್ಲ. ಸ್ವಲ್ಪ ವೈಟ್ ರೈಸ್, ಸ್ವಲ್ಪ ವೆಜ್ ಬಿರಿಯಾನಿ (ರೆಸ್ಟೋರೆಂಟ್ ಅವರ ಪ್ರಕಾರ ವೆಜ್ ಬಿರಿಯಾನಿ, ಆದರೆ ಅದು ವೆಜ್ ಪ್ರೈಡ್ ರೈಸ್ ಆಗಿತ್ತು), ಬೇಳೆ ಸಾರು, ಸ್ವಲ್ಪ ಗೋಬಿ ಮಂಚೂರಿಯನ್, ಒಂದು ಪರೋಟ, ಹಾಗು ಪಲ್ಯ ಕೊಟ್ರು. ಊಟ ಮಾಡಿ ಸ್ವಲ್ಪ ಹೊತ್ತು ಕುಳಿತು ಪುನಃ ನೀರಿನಲ್ಲಿ ಆಟವಾಡಲು ಹೊರಟೆವು.
ಮತ್ತೆ ಆಳವಿರುವ ಈಜು ಕೊಳಕ್ಕೆ ಹೋದೆವು, ನನ್ನ ಮಗ ಬಂದು ನಮ್ಮನ್ನು ಸೇರಿಕೊಂಡ ನಂತರ ಕೃತಕ ಅಲೆಗಳನ್ನು ಎಬ್ಬಿಸುವ ಯಂತ್ರವನ್ನು ಸ್ಟಾರ್ಟ್ ಮಾಡಿದ್ರು, ಸುಮಾರು ಒಂದು ಗಂಟೆಗಳ ಕಾಲ ಸಮುದ್ರದ ಅನುಭವ ಸಿಕ್ಕಿತು. ನನ್ನ ಮಗನ ಸಂತೋಷಕ್ಕೆ ಪಾರವೇ ಇರಲ್ಲಿಲ್ಲ . ಅಲ್ಲೇ ಪಕ್ಕದಲ್ಲಿ ಸುಮಧುರವಾದ ಸಂಗೀತದ ಜೊತೆ ಕೃತಕ ಮಳೆಯಲ್ಲಿ ಮಿಂದೆವು, ಸ್ವಲ್ಪ ನೃತ್ಯವನ್ನು ಮಾಡಿದೆವು. ಸಮಯ ಸುಮಾರು ನಾಲ್ಕು ಗಂಟೆ. ಬಟ್ಟೆ ಬದಲಾಯಿಸಿ ಅಲ್ಲಿಂದ ಮಂಗಳೂರು ಕಡೆ ಹೊರಟೆವು. ಮನೆಗೆ ಬಂದು ತಲುಪುವಾಗ ರಾತ್ರಿ ಎಂಟು ಗಂಟೆ.
ಮುಂದಿನ ಬಾರಿ ವಿಸ್ಮಯ ಕಣ್ಣೂರ್, ಕೇರಳ ಹೋಗುವ ಸಾಧ್ಯತೆ ಇದೆ. ಹೋಗಿ ಬಂದ ಮೇಲೆ ಅಲ್ಲಿನ ಅನುಭವವನ್ನು ನಿಮ್ಮಲ್ಲಿ ಹಂಚಿಕೊಳ್ಳುತೇನೆ. ನಮಸ್ಕಾರ ಗೆಳೆಯೆರೇ.
**ಕೆಲವೊಂದು ಫೋಟೋಸ್ ನಿಮಗಾಗಿ**

No comments:
Post a Comment