Tuesday, September 3, 2019

ಬಾಯಿ ಹುಣ್ಣಿಗೆ ಮನೆ ಮದ್ದು

                               ಉಷ್ಣ ಶರೀರದವರಿಗೆ ಸಾಮಾನ್ಯವಾಗಿ ಕಾಡುವುದು ಈ ಬಾಯಿ ಹುಣ್ಣು. ನಮ್ಮ ದೇಹದಲ್ಲಿ "ವಿಟಮಿನ್ ಬಿ" ಕಡಿಮೆಯಾದಾಗ, ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದಾಗ, ಸ್ವಚ್ಛವಾಗಿ ಹಲ್ಲು ಉಜ್ಜದಿದ್ದಾಗ ಸಾಮಾನ್ಯವಾಗಿ ಬಾಯಿ ಹುಣ್ಣು ಬರುತ್ತದೆ. ಎಡಕ್ಕೆ ಪ್ರತಿಯೊಬ್ಬರ ಅಂಗೈಯಲ್ಲೆ  ಔಷಧವಿದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ. ನಾನು ಎಲ್ಲಿ ಕೆಲವೊಂದು ಬಾಯಿ ಹುಣ್ಣು ವಾಸಿಯಾಗುವ ಔಷಧಗಳನ್ನು  ನಿಮ್ಮ ಮುಂದೆ ಇಡಲು ಬಯಸುತ್ತೇನೆ.

1).  ಬಸಳೆ ಸೊಪ್ಪು : Image result for basale soppu
ಎರಡು - ಮೂರೂ ಬಸಳೆ ಸೊಪ್ಪಿನ ಎಲೆಗಳನ್ನು ಚೆನ್ನಾಗಿ ತೊಳೆದು ಬಾಯಿಗೆ ಹಾಕಿ ಚೆನ್ನಾಗಿ ಜಗಿಯಿರಿ. ಇದೆ ರೀತಿ ದಿನಕ್ಕೆ ಮೂರೂ ಬಾರಿ ಜಗಿಯಿರಿ. ಹೀಗೆ ಮಾಡಿದಲ್ಲಿ ಮೂರೂ - ನಾಲ್ಕು ದಿನಗಳಲ್ಲಿ ನಿಮ್ಮ ಬಾಯಿ ಹುಣ್ಣು ಗುಣುವಾಗುತ್ತದೆ. ಬಸಳೆ ಸೊಪ್ಪನ್ನು ಜಗಿದು ನುಂಗಿದರೆ ಯಾವುದೇ ತೊಂದರೆ ಇಲ್ಲ. 
2). ತುಳಸಿ ಎಲೆImage result for tulasi
ನಾಲ್ಕು - ಐದು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಜಗಿಯಿರಿ. ಇದೆ ರೀತಿ ದಿನಕ್ಕೆ ಮೂರೂ ಬಾರಿ ಜಗಿಯಿರಿ. ಹೀಗೆ ಮಾಡಿದಲ್ಲಿ ಮೂರೂ - ನಾಲ್ಕು ದಿನಗಳಲ್ಲಿ ನಿಮ್ಮ ಬಾಯಿ ಹುಣ್ಣು ಗುಣುವಾಗುತ್ತದೆ. 
3). ಜೀರಿಗೆ : Image result for jeera     
ಒಂದು ಸ್ಪೂನ್ ಹಸಿ ಜೀರಿಗೆಯನ್ನು ದಿನಕ್ಕೆ ಎರಡು ಬಾರಿ ಚೆನ್ನಾಗಿ ಜಗಿಯಿರಿ. ಜೀರಿಗೆ ತಿನ್ನುವುದರಿದ ಬಾಯಿ ಹುಣ್ಣು ಕಡಿಮೆಯಾಗುವುದಲ್ಲದೆ, ನಾನಾ ಪ್ರಯೋಜನಗಳಿವೆ ಅಸಿಡಿಟಿ ಕಡಿಮೆ ಆಗುತ್ತದೆ, ಹಸಿವು ಜಾಸ್ತಿಯಾಗುತ್ತದೆ. 
4).  ಜೇನು ತುಪ್ಪ :Image result for honey
ಜೇನು ತುಪ್ಪ ಮತ್ತು ಅರಸಿನ ಪುಡಿ ಮಿಶ್ರಣವನ್ನು ಬಾಯಿ ಹುಣ್ಣಿಗೆ ಹಚ್ಚಿ ಹತ್ತು - ಹದಿನೈದು ನಿಮಿಷಗಳ ನಂತರ ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದಲ್ಲಿ ಮೂರೂ - ನಾಲ್ಕು ದಿನಗಳಲ್ಲಿ ನಿಮ್ಮ ಬಾಯಿ ಹುಣ್ಣು ಗುಣುವಾಗುತ್ತದೆ.
                Image result for coconut milkImage result for curd
5). ತೆಂಗಿನಕಾಯಿ ಹಾಲು ಅಥವಾ ಮೊಸರು : 
ತೆಂಗಿನಕಾಯಿ ಹಾಲು ಅಥವಾ ಮೊಸರಿನಿಂದ ದಿನಕ್ಕೆ ಮೂರೂ ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
6). ಅಲವೇರಾ ಜೆಲ್ : Related image
ತಾಜಾ ಅಲವೇರಾದ  ಮೇಲಿನ ತೊಗಟೆಯನ್ನು ತೆಗೆದು ಒಳಗಿನ ಜೆಲ್ಲನ್ನು ಬಾಯಿ ಹುಣ್ಣಿಗೆ ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ಬಾಯನ್ನು ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದಲ್ಲಿ ಮೂರೂ - ನಾಲ್ಕು ದಿನಗಳಲ್ಲಿ ನಿಮ್ಮ ಬಾಯಿ ಹುಣ್ಣು ಗುಣುವಾಗುತ್ತದೆ.
7). ಅಡುಗೆ ಸೋಡಾ ಪುಡಿ Image result for aduge soda paste
ಅಡುಗೆ ಸೋಡಾ ಪುಡಿಯನ್ನು ನೀರಿನಲ್ಲಿ ಕಲಸಿ ಮಿಶ್ರಣ ಮಾಡಿ ಬಾಯಿ ಹುಣ್ಣಿಗೆ ಹಚ್ಚಿ ಹತ್ತು - ಹದಿನೈದು ನಿಮಿಷ ಬಿಟ್ಟು ಬಾಯನ್ನು ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ. ಸ್ವಲ್ಪ ಬಾಯಿ ಉರಿ ಬರುತ್ತದೆ, ಆದರೆ ಯಾವುದೇ ತೊಂದರೆ ಇಲ್ಲ. 
                          ಪ್ರತಿಯೊಬ್ಬರ ಕೆಲವು ರೋಗಗಳಿಗೆ ಅವರ ಜೀವನ ಶೈಲಿಯೇ ಕಾರಣ. ಪ್ರತಿನಿತ್ಯ ನಾವು ಕನಿಷ್ಠ ಎರಡರಿಂದ ಮೂರೂ ಲೀಟರ್ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯವೇ ಭಾಗ್ಯ....

4 comments: