Tuesday, September 3, 2019

ಸಂಬಂಧವೇ ಚಂದ......

                              ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ತಂದೆ - ತಾಯಿ, ಅಣ್ಣ - ತಮ್ಮ, ಅಕ್ಕ - ತಂಗಿ, ಅತ್ತೆ - ಮಾವ, ಅಜ್ಜ - ಅಜ್ಜಿ, ಸೋದರತ್ತೆ - ಸೋದರಮಾವ, ಅತ್ತಿಗೆ - ಮೈದುನ, ಬೀಗರು - ಬೀಗತಿಯರು, ನಾದಿನಿ ಹೀಗೆ ಸಂಬಂಧಗಳ ಕೊಂಡಿ ಬೆಸೆದುಕೊಂಡಿದೆ. ಈ ಸಂಬಂಧಗಳೆಲ್ಲ ಬೆರಳೆಣಿಕೆ ಜನಗಳಿಗಷ್ಟೇ ಗೊತ್ತು. ಇವತ್ತಿನ ಯುವ ಜನಾಂಗಕ್ಕೆ ಹೆಚ್ಚೆಂದರೆ 4 - 5 ಸಂಬಂಧಗಳ ಪರಿಚಯ ಇರಬಹುದಷ್ಟೆ. ಕೇವಲ 25 ವರುಷಗಳ ಹಿಂದೆ ಈ ಸಂಬಂಧಗಳಿಗೆ ಮೌಲ್ಯಯುತವಾದ ಬೆಲೆ ಇತ್ತು. ಆದರೆ ಈ ಆದುನಿಕ ಜಗತ್ತಿನಲ್ಲಿ ಸಂಬಂಧಗಳೆಲ್ಲ ಸ್ಮಾರ್ಟ್ ಫೋನಿಗೆ ಸೀಮಿತವಾಗಿದೆ. ಅಣ್ಣ, ತಮ್ಮ, ಗೆಳೆಯ ಯಾರೇ ಇರಲಿ ನಮ್ಮ ಯುವ ಪೀಳಿಗೆ ಉಪಯೋಗಿಸುವ ಪದ ಒಂದೇ
"Bro", ಯುವತಿಯಾಗಿದ್ದರೆ "Sis". ಸಂಬಂಧ ಮೂರೂ ಆಂಗ್ಲ ಅಕ್ಷರ ಕೊನೆಗೊಂಡಿದೆ, ಯೋಚಿಸಲು ಬೇಸರವಾಗುತ್ತೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಪ್ರತಿಯೊಂದು ಸಂಬಂಧವನ್ನು ಸಂತೋಷದಿಂದ ಬಾಯಿ ತುಂಬಾ ಕರೆಯುತಿದ್ದರು. ಆದರೆ ಇವತ್ತು ಸಂಬಂಧಗಳ ಹೆಸರನ್ನು ಕೇಳುವುದೇ ಅಪರೂಪವಾಗಿದೆ. ಇದಕ್ಕೆ ಕಾರಣ ನಮ್ಮ ಇವತ್ತಿನ ಜೀವನ ಶೈಲಿ ಎಂದರೆ ತಪ್ಪಾಗಲಾರದು. ಈ ಪ್ರಪಂಚದಲ್ಲಿ ನಮಗಾರಿಗೂ ಯಾರೊಂದಿಗೂ ಬೇರೆಯಲು ಸಮಯವಿಲ್ಲ, ಆದರೂ ನಮ್ಮ ದೇಶದಲ್ಲಿ ನಿರೊದ್ಯೋಗಕ್ಕೇನೂ ಬರವಿಲ್ಲ. ಶಾಲಾ ಮಕ್ಕಳಂತೂ ಶಾಲೆಯಲ್ಲಿ ಆಟ - ಪಾಠದಲ್ಲಿ ಬಿಡುವಿಲ್ಲದ ಚಟುವಟಿಕೆ, ಸಂಜೆ ಶಾಲೆ ಮುಗಿದ ನಂತರ ಟ್ಯೂಷನ್ ನ ಒತ್ತಡ ಬೇರೆ. ವಾರದಲ್ಲಿ ಒಂದು ದಿನ ರಾಜಾವಿದ್ದರೂ, ಕೆಲವು ಗೆಳೆಯ / ಗೆಳೆಯರು ಹೊರಗಡೆ ಸುತ್ತಾಡಲು ಹೋಗುತ್ತಾರೆ. ಇನ್ನು ಕೆಲವರು ಮನೆಯಲ್ಲೇ ಸ್ಮಾರ್ಟ್ ಫೋನಿಗೆ ಅಂಟಿಕೊಂಡಿರುತ್ತಾರೆ. ಈ ಫೋನಿನಲ್ಲಿ ಒಂದ ಎರಡ ವಾಟ್ಸಾಪ್ , ಫೇಸ್ಬುಕ್, ಟ್ವಿಟ್ಟರ್, ಗೇಮ್ಸ್ ಹೀಗೆ ನಾನಾ ತರಹದ ನಮಗೆ ಹುಚ್ಚು ಹಿಡಿಸುವ ಆಪ್ಸ್ ಗಳು ಇವೆ. ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಆಟ ಆಡುವವರು ಕಾಣಸಿಗುವುದೆ ಅಪರೂಪವಾಗಿದೆ, ಕಾರಣ ಸ್ಮಾರ್ಟ್ ಫೋನ್ ಗೇಮ್ಸ್. ಇವಾಗಂತೂ ವಯಸ್ಸಿನ ಅಂತರವಿರದೆ ಆಡುವ ಆಟ ಒಂದೆ ಪಬ್ ಜೀ. ಇದು ಬೇತಾಳ ಬೆನ್ನಿಗೆ ಬಿದ್ದ ಹಾಗೆ, ನಮ್ಮ ಮನಸ್ಸನ್ನು ತನ್ನ ಹತೋಟಿಗೆ ತೆಗೆದುಕೊಂಡು ಮಾನವೀಯ ಮೌಲ್ಯವನ್ನೇ ಹಾಳು ಮಾಡಿ ಸಂಬಂಧವನ್ನೇ ಕೆಡಿಸುತ್ತೆ. ಈ ಫೋನಿಗೆ ಅಂಟಿಕೊಳ್ಳುವುದನ್ನು ಬಿಟ್ಟು ನಾವೇ ಹುಟ್ಟು ಹಾಕಿದ ಅದೆಷ್ಟೋ ಆಟಗಳಿವೆ ಅದರೊಂದಿಗೆ ನಮ್ಮ ಜೊತೆಗಾರರ ಜೊತೆ ಸೇರಿ ಹೆಚ್ಚು ಸಮಯ ಕಳೆಯೋಣ, ಸಂಬಂಧಗಳ ಭದ್ರಕೋಟೆ ಕಟ್ಟೋಣ.  ನಮಗೆ ಸಿಗುವ ಅಮೂಲ್ಯವಾದ ಸಮಯವನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಯಾವತ್ತೂ ಸಿಗುವುದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಮೌಲ್ಯಯುತವಾದ ಸಂಬಂಧಗಳ ಬಗ್ಗೆ ಜಾಗ್ರತೆ ಮೂಡಿಸೋಣ, ಹತ್ತು ಜನರೊಂದಿಗೆ ಕೂಡಿ ಸಿಗುವ ಖುಷಿನೇ ಬೇರೆ. ಸರಿ, ಬನ್ನಿ ಎಲ್ಲರೂ ಸೇರಿ ಒಂದು ಲಗೋರಿ ಆಡೋಣ  ಏನಂತೀರಿ.........!

1 comment:

  1. ಲಗೋರಿ ಬೇಡ ಜಿಬ್ಲಿ ಆಡೋಣ ಏನಂತೀರಾ...😂😂😂😂

    ReplyDelete