Wednesday, September 11, 2019

ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಟ ನೈವೇದ್ಯ. ?

                        ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಟ ನೈವೇದ್ಯ. ? ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತು ತೆಂಗಿನಕಾಯಿ ಯಾಕೆ ತೆಗೆದುಕೊಂಡು ಹೋಗುತ್ತೇವೆ ? ದೇವರಿಗೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಏಕೆ?  ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ?

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ, ಹಾಗೆಯೇ ತೆಂಗಿನಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯ ಏನು?

Friday, September 6, 2019

ಹಾಸ್ಯ ನಗೆಹಬ್ಬ

            ತಲೆ ಕೂದಲು
ನೀಲಮ್ಮ: ನಿನ್ನ ತಲೆ ಕೂದಲು ಎಷ್ಟೊಂದು ಉದ್ದ ಹಾಗೂ ದಟ್ಟವಾಗಿದೆಯಲ್ಲಾ ಕೂದಲಿಗೆ ಏನು ಹಚ್ಚುತಿಯಾ?
ಮಲ್ಲಮ್ಮ:  ಬೆಳ್ಳಗ್ಗೆ ಶಾಂಪೂ ಹಾಕಿ ಸ್ನಾನ ಮಾಡುತ್ತೆನೆ, ಸಂಜೆ ಕೊಬ್ಬರಿ ಎಣ್ಣೆ ಹಚ್ಚುತ್ತೇನೆ.

Thursday, September 5, 2019

ಹಂಬಲಿಸಿದೆ ನಿನ್ನ ಮನಸ್ಸ..............

ಹಂಬಲಿಸಿದೆ ನಿನ್ನ ಮನಸ್ಸ..............
ಹಂಬಲಿಸಿದೆ ನಿನ್ನೇ....  ನನ್ನೀ ಮನಸ್ಸು,
ಹೊರಟೆ ಬಿಟ್ಟಿದೆ ಹುಡುಕುತ್ತ ನಿನ್ನ ಮನಸ್ಸ......
ದಾರಿ ಕಾಣದೇ ಎಲ್ಲಿಹುದೊ ನನ್ನ ಮನಸ್ಸು,

Wednesday, September 4, 2019

ಸಂಬಂಧಕ್ಕೊಂದು ದಿನ..........


Related image
ವರುಷಕ್ಕೊಮ್ಮೆ ನೆನೆಯುವೆವು ನಮ್ಮ ಜನುಮ ದಿನವ........ 
ಹೆತ್ತ ತಾಯಿಯ ನೆನೆಯಲಿಟ್ಟೆವು ವರುಷಕ್ಕೊಂದಿನವ..... 
ಹೆಗಲ ಮೇಲೆ ಹೊತ್ತು ಜಗತ್ತನ್ನೇ ತೋರಿದವಗಿಟ್ಟೆವು ವರುಷಕ್ಕೊಂದಿನವ..... 
ಅಣ್ಣ - ತಂಗಿ ಸಂಬಂಧಕ್ಕೊಂದಿನವ, ಗೆಳೆಯ - ಗೆಳತಿಯರ ನೆನೆಯಲೊಂದಿನವ,
ರಕ್ತ ಧಾನಕ್ಕೊಂದಿನವ, ನಗುವುದಕ್ಕೊಂದಿನವ, ಗಿಡ ನೆಡುವುದಕ್ಕೊಂದುದಿನವ,
ನಮಗೆ ಸಾಕೇ ಬದುಕಲೊಂದುದಿನವ, ಸಂಬಂಧಗಳನ್ನು ಕಟ್ಟಿ ಹಾಕುವುದೇಕೆ ವರುಷಕ್ಕೊಂದಿನವ.....
ಸಂಬಂಧ ಬೆಸೆಯೋಣ ಪ್ರತಿ ದಿನ  ದಿನವ......... 

ಜೀವನ...........


Image result for boatman with sunset
ಜೀವನವೆಂಬ ನೌಕೆಯಲ್ಲಿ ಒಂಟಿ ಪಯಣಿಗ ನಾ..... 
ಸತ್ತು ಸೇರೊ ಸ್ವರ್ಗ ಎಲ್ಲೆಂದು ಕಾಣೆ ನಾ...... 
ಇಲ್ಲೇ ಸ್ವರ್ಗ, ಇಲ್ಲೇ ನರಕವೆಂದು ಬಲ್ಲೆ ನಾ..... 
ಮಣ್ಣು ಸೇರೊ ದೇಹವಿದು ಯಾಕಿಷ್ಟು ಅಸೆ ಅರಿಯೇ ನಾ...... 
ಸತ್ತ ಮೇಲೆ ಜೊತೆ ಬರುವುದೇನೆಂದು ಅರಿತುಕೊಂಡೆ ನಾ...... 
ಮದ್ಯ ರಾತ್ರಿ ಬೀಳೋ ಕನಸೇ ಈ ಜೀವನ ............ 

Tuesday, September 3, 2019

ಬಾಯಿ ಹುಣ್ಣಿಗೆ ಮನೆ ಮದ್ದು

                               ಉಷ್ಣ ಶರೀರದವರಿಗೆ ಸಾಮಾನ್ಯವಾಗಿ ಕಾಡುವುದು ಈ ಬಾಯಿ ಹುಣ್ಣು. ನಮ್ಮ ದೇಹದಲ್ಲಿ "ವಿಟಮಿನ್ ಬಿ" ಕಡಿಮೆಯಾದಾಗ, ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದಾಗ, ಸ್ವಚ್ಛವಾಗಿ ಹಲ್ಲು ಉಜ್ಜದಿದ್ದಾಗ ಸಾಮಾನ್ಯವಾಗಿ ಬಾಯಿ ಹುಣ್ಣು ಬರುತ್ತದೆ. ಎಡಕ್ಕೆ ಪ್ರತಿಯೊಬ್ಬರ ಅಂಗೈಯಲ್ಲೆ  ಔಷಧವಿದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ. ನಾನು ಎಲ್ಲಿ ಕೆಲವೊಂದು ಬಾಯಿ ಹುಣ್ಣು ವಾಸಿಯಾಗುವ ಔಷಧಗಳನ್ನು  ನಿಮ್ಮ ಮುಂದೆ ಇಡಲು ಬಯಸುತ್ತೇನೆ.

ಸಂಬಂಧವೇ ಚಂದ......

                              ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ತಂದೆ - ತಾಯಿ, ಅಣ್ಣ - ತಮ್ಮ, ಅಕ್ಕ - ತಂಗಿ, ಅತ್ತೆ - ಮಾವ, ಅಜ್ಜ - ಅಜ್ಜಿ, ಸೋದರತ್ತೆ - ಸೋದರಮಾವ, ಅತ್ತಿಗೆ - ಮೈದುನ, ಬೀಗರು - ಬೀಗತಿಯರು, ನಾದಿನಿ ಹೀಗೆ ಸಂಬಂಧಗಳ ಕೊಂಡಿ ಬೆಸೆದುಕೊಂಡಿದೆ. ಈ ಸಂಬಂಧಗಳೆಲ್ಲ ಬೆರಳೆಣಿಕೆ ಜನಗಳಿಗಷ್ಟೇ ಗೊತ್ತು. ಇವತ್ತಿನ ಯುವ ಜನಾಂಗಕ್ಕೆ ಹೆಚ್ಚೆಂದರೆ 4 - 5 ಸಂಬಂಧಗಳ ಪರಿಚಯ ಇರಬಹುದಷ್ಟೆ. ಕೇವಲ 25 ವರುಷಗಳ ಹಿಂದೆ ಈ ಸಂಬಂಧಗಳಿಗೆ ಮೌಲ್ಯಯುತವಾದ ಬೆಲೆ ಇತ್ತು. ಆದರೆ ಈ ಆದುನಿಕ ಜಗತ್ತಿನಲ್ಲಿ ಸಂಬಂಧಗಳೆಲ್ಲ ಸ್ಮಾರ್ಟ್ ಫೋನಿಗೆ ಸೀಮಿತವಾಗಿದೆ. ಅಣ್ಣ, ತಮ್ಮ, ಗೆಳೆಯ ಯಾರೇ ಇರಲಿ ನಮ್ಮ ಯುವ ಪೀಳಿಗೆ ಉಪಯೋಗಿಸುವ ಪದ ಒಂದೇ