Saturday, March 7, 2020

ನಮ್ಮ ನೆಲಕ್ಕೆ ಕಾಲಿಟ್ಟ ಕೊರೋನಾ ವೈರಸ್ .

            ಚೀನಾದಲ್ಲಿ ಹುಟ್ಟಿ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ನಿಮಗೆಲ್ಲ ತಿಳಿದಿದೆ. ಕೋರೋನ ವೈರಸ್ ಬಗ್ಗೆ ನಾನು ನಿಮಗೆ ಹಿಂದಿನ ಬ್ಲಾಗ್ ನಲ್ಲಿ ತಿಳಿಸಿದ್ದೇನೆ. ಓದದವರು ಒಮ್ಮೆ ಓದಿ. ಇವಾಗ ಭಯಬೀಳಿಸುವ ವಿಷಯವೆಂದರೆ ಕೋರೋನ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ವೈರಸ್ ಗೆ ಭಾರತೀಯರು ತುಂಬ ಭಯಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ ಸುಮಾರು 30 ಮಂದಿಗೆ ಕೋರೋನ ವೈರಸ್ ಸೋಂಕು ತಗುಲಿರುವ ವರದಿಯಾಗಿದೆ.

Wednesday, March 4, 2020

ಚಿಕನ್ ತಿನ್ನದವರು ಕಂಡು ಹಿಡಿದ ಚಿಕನ್ ಮಸಾಲಾ.....

            ಆಧುನಿಕ  ಜಗತ್ತಿನ ಪ್ರತಿಯೊಬ್ಬರಿಗೂ ಪ್ರತಿಯೊಂದು ಕೆಲಸನೂ ಆದಷ್ಟು ಬೇಗನೆ ಆಗಬೇಕು. ಅದರಲ್ಲಿ ಮುಖ್ಯವಾಗಿ  ಮಹಿಳೆಯರಿಗೆ ಮನೆ ಕೆಲಸವೆಲ್ಲ ಬೇಗ ಬೇಗ ಮಾಡಿ ಮುಗಿಸಿ ಟಿವಿ ಮುಂದೆ ಕುಳಿತುಕೊಳ್ಳುವ ಆತುರ ಹೆಚ್ಚು. ಅದರಲ್ಲೂ ಅಡುಗೆ ಕೆಲಸವಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಟಿವಿ ಮುಂದೆ ಕುಳಿತುಕೊಂಡು ತರಕಾರಿ ಹೆಚ್ಚುವುದು, ಅಡುಗೆ ಮನೆಗೆ  ಕಾಣಿಸುವಂತೆ ಟಿವಿಯನ್ನೂ ಇಟ್ಟಿರುತ್ತಾರೆ.
   ನಾನು ಹೊಸದಾಗಿ Youtube ಚಾನೆಲ್ ಶುರುಮಾಡಿದ್ದೇನೆ. ದಯವಿಟ್ಟು ಚಾನೆಲಿಗೆ ಚಾಂದಾದಾರರಾಗಿ (Subscribe), ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ನಿಮ್ಮ ಅನಿಸಿಕೆಗಳನ್ನು ದಯಮಾಡಿ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ. ನಿಮ್ಮ ಸಪೋರ್ಟ್ ನನಗೆ ಹೆಚ್ಚಿನ ವಿಡಿಯೋ ಮಾಡಲು ಸಹಕಾರಿಯಾಗುತ್ತದೆ.